Tuesday, July 20, 2010
ನೀನಿಲ್ಲದೆ ನನ್ನ ಬಾಳಲ್ಲಿ ಏನೋ
ಕಳೆದುಕೊಂಡಂತಹ ಭಾವನೆ
ನೀನಿಲ್ಲದೆ ನನ್ನ ಜೀವನದಲ್ಲಿ ಬೆಳಕು
ಮಾಯವಾದಂತಹ ಅನಿಸಿಕೆ
ಓ ಪ್ರಿಯತಮೆ ನನ್ನ ಬಿಟ್ಟು ನೀನು ಹೇಗಿರುವೆ?
ಒಮ್ಮೆ ನನ್ನ ಬಾಳಲ್ಲಿ ಬಂದು
ಕಳೆದುಹೋದಂತಹ ಸಂತೋಷವನ್ನು ತುಂಬಿಸು
ಒಮ್ಮೆ ಬಂದು ಬಿಸಿಲಲ್ಲಿ ನನಗೆ ನೆರಳಾಗು
ನನ್ನ ಜೀವನದಲ್ಲಿ ಬೆಳಕಾಗು
ನಿನ್ನನ್ನು ನನ್ನ ಬಾಳಲ್ಲಿ ಕಳೆದುಕೊಂಡಂತಹ
ಆ ಭಾವನೆ ನರಕ
ನನ್ನ ಬಾಳಲ್ಲಿ ಬೇಗನೆ ಬಂದು
ಕೊಡು ನನಗೆ ಮಾಯವಾದಂತಹ ಸಂತೋಷ
ನಿನ್ನನ್ನು ನಾನು ಯಾವಾಗಲೂ ಕಳೆದುಕೊಳ್ಳೆನು
ಇದು ನನ್ನ ಆತ್ಮ ವಿಶ್ವಾಸ
ನಿನಗಾಗಿ ನನ್ನ ಇಡೀ ಬಾಳನ್ನು ಸಮರ್ಪಿಸುತ್ತೇನೆ
ನಿನಗಾಗಿ ಸದಾ ಕಾಲ ನಾನು ಕಾದಿರುತ್ತೇನೆ
ಬೇಗನೆ ನನ್ನ ಬಾಳಲ್ಲಿ ಬಂದು
ನನ್ನ ಬಾಳನ್ನು ದೀಪವಾಗಿ ಅಲಂಕರಿಸು
ಇದೇ ನನ್ನ ಕೊನೆಯ ಪ್ರಾರ್ಥನೆ.
by Cletan sequeira
Sunday, July 18, 2010
ನಿನ್ನ ಮೊದಲ ನೋಟದಲ್ಲಿ ನನ್ನ ಹೃದಯವನ್ನು ಕದ್ದೆಯಲ್ಲೇ
ನಿನ್ನ ಮೊದಲ ಭೇಟಿಯಲ್ಲಿ ನನ್ನನ್ನು ನಾನೇ ಮರೆತೆನಲ್ಲೇ
ನಿನ್ನ ಪ್ರೀತಿಯಿಂದ ನಾನೇ ಕಳೆದುಹೋದೆನಲ್ಲೇ
ನಿನ್ನ ಅಂದಚಂದಕೆ ನಾನು ಕುರುಡನಾದೆನಲ್ಲೇ
ಗೆಳತಿ ನನ್ನ ಬದುಕಿನಲ್ಲಿ ನೀನು ಏಕೆ ಬಂದೆ?
ನೀನಿಲ್ಲದೆ ನನ್ನ ಬಾಳು ದೀನವಾಗಿತ್ತು
ನನ್ನ ಹೃದಯ ಒಂಟಿಯಾಗಿತ್ತು
ನನ್ನ ಮನಸ್ಸು ಅನಾಥವಾಗಿತ್ತು
ನಿನ್ನ ಆಗಮನದಿಂದ ನನ್ನ ಬಾಳಿಗೆ ಬಂತು ಬೆಳಕು
ಹೃದಯಕ್ಕೆ ಸಿಕ್ಕಿತು ದೀಪ
ಮನಸ್ಸಿಗೆ ಲಭಿಸಿತು ಚೇತನ
ಮಾಯವಾಯಿತು ಎಲ್ಲಾ ನನ್ನ ಪಾಪ
ಓ ಗೆಳತಿ ಓ ನನ್ನ ಗೆಳತಿ
ಈಗ ನನ್ನ ಹೃದಯ ನಿನಗಾಗಿ ಬಡಿಯುತಿದೆ
ನನ್ನ ಬಾಳಲ್ಲಿ ಬಂದು ನನ್ನ ಬಾಳನ್ನು ಸುಗಮಗೊಳಿಸು
ಇದೇ ನನ್ನ ಹಿರಿಯಾಸೆ ಇಂದು ಎಂದೆಂದಿಗೂ
Cletan Sequeira
ಬಾ ಬಾರೋ ಬಾರೋ....ಬಾ ಬಾರೋ ಬಾರೋ
ಬಾ ಬಾರೋ ಭಗವಂತ ಭಗವಂತ
ತೋರಯ್ಯ ನಿನ್ನಯ ಮಹಿಮೆಯ ಗುಣವಂತ, ಗುಣವಂತ
ಸಿಡಿಲಾಗಿ, ಮಳೆಯಾಗಿ, ಮಿಂಚಾಗಿ, ಮಳೆಯಾಗಿ
ಭೂಮಿಗೆ ಬಾರಯ್ಯ ನನ್ನಯ್ಯ ಭಗವಂತ
ಪೂಜಾರಿ ಬಾಯಲ್ಲಿ, ಭಕ್ತಿಯ ಮಾತಿಲ್ಲ, ವಿದ್ಯಾರ್ಥಿ ಮನಸಲ್ಲಿ
ಓದುವ ಛಲವಿಲ್ಲ, ಸತ್ಯಕ್ಕೆ ಬೆಲೆಯಂತೂ ಮೊದಲೇನೆ ಇಲ್ಲಿಲ್ಲ
ಅವತಾರಿ ನೀನಾಗಿ ಬಾರಯ್ಯ ಭೂಮಿಗೆ ಭಗವಂತ ಭಗವಂತ
ಬಾ ಬಾರೋ ಭಗವಂತ ಗುಣವಂತ
ತೋರಯ್ಯ ನಿನ್ನಯ ಮಹೆಮೆಯ ಗುಣವಂತ, ಭಗವಂತ
ಸೃಷ್ಟಿಯ ಮೂಲಾನು ನೀನಯ್ಯ ಭಗವಂತ
ಕರೆದರೂ ಕೇಳದೇ ಹೋಗುವೆ ಯಾಕಂತ
ಬಡವರ ಪಾಲಿಗೆ ಭಾಗ್ಯವ ನೀಡಯ್ಯ
ಬೇಡಿ ಬಂದವರ ಹರಸಲು ಬಾರಯ್ಯ ಭಗವಂತ ಭಗವಂತ
ಅನ್ಯಾಯ ಮಾಡುವ ಜನರನ್ನ ನೋಡಯ್ಯ ಸರಿದಾರಿಯಲ್ಲಿ
ನಡೆಯುವ ಮಾರ್ಗವ ನೀಡಯ್ಯ
ಕಷ್ಟ ಪಡುವ ಕೈಗಳನ್ನು ಕಾಪಾಡಲು ಬಾರಯ್ಯ
ನಿನ್ನನ್ನು ನಂಬಿದವರನ್ನು ಕೈಬಿಡದೆ ಕಾಯಯ್ಯ
ಬಾ ಬಾರೋ ಭಗವಂತ ಭಗವಂತ
ತೋರಯ್ಯ ನಿನ್ನಯ ಶಕ್ತಿಯ ಗುಣವಂತ, ಭಗವಂತ
ಸಕಲ ಜೀವಿಯಲ್ಲೂ ನೀನಯ್ಯ ನೆನೆದೊಡೆ ಮನದಲ್ಲಿ
ನೆಲೆಸುವಂತೆ ನೋಡಯ್ಯ
ಪಂಚಭೂತಗಳಲ್ಲೂ ನೀನಯ್ಯ ಪರರ ನಿಂದನೆ ನಿಲ್ಲಿಸಲು
ಭೂಮಿಗೆ ಬಾರಯ್ಯ
ನೀ ತೋರುವ ದಾರಿಯು ನನಗಯ್ಯ
ನಾ ನಡೆವೆನು ಮಾರ್ಗವ ತೋರಯ್ಯ
ಏನೇ ಬರಲಿ ಬಾಳಲಿ ನಾನೆಂದೂ ನಿನ್ನ ಬಿಡೆನು ಕೇಳಯ್ಯ
ಈಗಾದರೂ ಬಂದು ನನ್ನನ್ನು ಹರಸಯ್ಯ
ಬಾ ಬಾರೋ ಬಾರೋ ಭಗವಂತ ಗುಣವಂತ
ತೋರಯ್ಯ ನಿನ್ನಯ ಮಹೆಮೆಯ ಗುಣವಂತ, ಭಗವಂತ
by Guddappa
ಎಂದೂ ಕಾಣದ ನಾಚಿಕೆಯನ್ನು
ನಿನ್ನ ಮುಖದಲ್ಲಿ ಅಂದು ನಾ ಕಂಡೆನು
ಅವಳ ಹೆಸರು ಕೇಳಿದೊಡನೆ ಏನೋ
ನಿನ್ನ ಮುಖದಲ್ಲಿ ಆನಂದ
ಆದರೂ ಅಣ್ಣ, ನೀನು ಅತ್ತಿಗೆ ಜೊತೆಗಿನ
ಸಂಬಂಧವನ್ನು ಒಪ್ಪಿಕೊಳ್ಳುವುದು ಯಾವಾಗ?
ಪ್ರೀತಿ ಮಾಡಿದರೆ ಜಗಕೆ ಹೆದರಬಾರದು
ಎಂಬ ಕಿವಿಮಾತು ನಿನಗೆ ತಿಳಿಯುವುದು ಯಾವಾಗ?
ತಿಳಿದರೂ ನೀನು ಅದನ್ನು ಅರಿಯುವುದು ಯಾವಾಗ?
ನಿನ್ನ ಈ ಜೀವನದ ರಹಸ್ಯವನ್ನು ಎಂದಿನವರೆಗೆ ಗೆಳೆಯರಿಂದ ಮುಚ್ಚಿಡುವೆ?
ಇನ್ನಾದರೂ ನಿನ್ನ ಸಂತೋಷವನ್ನು ಗೆಳೆಯರ ಜೊತೆ ಹಂಚಬಾರದೇ?
ಅತ್ತಿಗೆಗೆ ಸಲ್ಲಿಸುತ್ತ ನನ್ನ ನಮನ
ನಿಮ್ಮ ಹಾಗೂ ನಿಮ್ಮ ಪ್ರೀತಿಯ ಸುಖಜೀವನಕ್ಕಾಗಿ ಅರ್ಪಿಸುವೆ ನನ್ನ ಕವನ
by Cletan Sequeira
Saturday, March 6, 2010
ನಿನ್ನ ಆ ನಗುವಿನಿಂದ ನನ್ನ ನೋವೆಲ್ಲಾ ಮರೆತೆ
ನಿನ್ನ ಆ ಅಂದದಿಂದ ನನ್ನಲ್ಲಿ ಪ್ರೀತಿಯಾ ತಂದೆ
ಹಾಡುವ ಆಸೆಯಾಯಿತೆಂದೆ ನೀ ನನ್ನ ಕನಸಲ್ಲಿ ಬಂದು ನಿಂತೆ
ಸ್ವರದ ರೂಪದಲ್ಲಿ ನೀ ನನ್ನೆದೆಯಲ್ಲಿ ಬಂದು ಕೂತೆ
ನನ್ನೇ ನಾನು ಮರೆತು ನಿನಗಾಗಿ ಕಾದು ಕೂತೆ
ಈ ಪ್ರೀತಿಯಲ್ಲಿ ಸಿಕ್ಕು ನಾ ನಿನಗೆ ಸೋತು ಹೋದೆ
ತಂದೆ ತಾಯಿ ಋಣವ ನಾ ಮರೆತು ಹೋದೆನಲ್ಲೇ
ಈ ಹುಚ್ಚು ಪ್ರೀತಿ ಹೆಚ್ಚಾಗಿ ನಾ ಎಲಾ ಮರೆತೆನಲ್ಲೇ
ಇಷ್ಟಾದರೂ ನನಗೆ ಬರೀ ನಿನ್ನದೇ ಬಯಕೆ
ನಿನ್ನ ಆ ನಗುವಿನಿಂದ ನಾನು ಕೊನೆಗೆ ಮಣ್ಣಾಗಿ ಹೋದೆನಲ್ಲೇ
by Guddappa
ಹಾರೈಕೆ (ಬಯಕೆ)
ಆ ನಿನ್ನ ಕಣ್ಣ ಕಾಂತಿಯು ನನ್ನ ಮನಸ್ಸಾ ಸೆಳೆಯಿತಲ್ಲಾ
ನಿನ್ನ ಕಣ್ಣ ಸನ್ನೆ ನನ್ನ ಮೂಕಾಗಿಸಿತಲ್ಲಾ
ಮಾತಿಲ್ಲಾ ಕತೆಯಿಲ್ಲಾ ಈ ಮನಸ್ಸಿನ ತುಂಬಾ ನಿನ್ನದೇ ನೆನಪಲ್ಲಾ
ನನ್ನ ಉಸಿರು ನೀನಾಗಿ ಹಾಡುಬಾರೆ ಜೊತೆಯಾಗಿ
ಜೇನು ಗೂಡಿನಂತಾ ನನ್ನ ಈ ಹೃದಯದಲ್ಲಿ ಜೇನಾಗಿ
ನೀ ಬಂದು ಜೇನಸಿಹಿಯ ತುಂಬಬಾರದೇನು?
ಕಹಿ ನೆನಪುಗಳೇ ತುಂಬಿರುವ ನನ್ನ ಹೃದಯದಲ್ಲಿ
ಸಿಹಿ ಜೇನನ್ನು ತುಂಬಬಾರದೇನು?
ಹಾರೋ ಹಕ್ಕಿಯಂತೆ ರೆಕ್ಕೆ ಬಿಚ್ಚಿ ನನ್ನನ್ನು ಸೇರಬಾರದೇನು?
ಚುಕ್ಕಿಯಂತಹ ನಿನ್ನ ಕಣ್ಣ ಅಂದ ನನ್ನನ್ನು ಸೆಳೆಯದೇ ಇರುವುದೇನು?
ರಸಪಾಕದಂತಹ ನಿನ್ನ ನಗು ನನ್ನನ್ನು ಕೆಣಕದೇ ಇರುವುದೇನು?
ಎಷ್ಟು ಹೊಗಳಿದರೂ ಮುಗಿಯದು ನಿನ್ನಂದ ಮೂಕನಾಗಿ
ಎಷ್ಟು ಹೊಗಳಿದರೂ ಮುಗಿಯದು ನಿನ್ನಂದ ಮೂಕನಾಗಿ
ಕೊನೆಗೆ ನಾ ಹಾರೈಸುವೆ ಇರಲಿ ನಿನ್ನ ಬಾಳು ಎಂದೆಂದು ಚೆಂದ ಚೆಂದ
by Guddappa
Friday, November 20, 2009
ಗೆಳೆತನ
ಓ ಗೆಳೆಯ ಓ ನನ್ನ ಗೆಳೆಯ ಸಲ್ಲಿಸುವೆ ನಿನಗೆ ನಮನ
ನಿನಗಾಗಿಯೇ ಈ ಪುಟ್ಟ ಕವನ
ನೀನೇ ಹೇಳಿಕೊಟ್ಟೆ ಜೀವಿಸಲು ಈ ಜೀವನ
ಪಡೆದೆ ನಾನು ನಿನ್ನಿಂದ ಈ ಮರೆಯಲಾಗದ ಗೆಳೆತನ
ನೀ ಜೊತೆಗೆ ಇದ್ದರೆ ನಾ ಹೆದರುವೆನಾ?
ನಿನ್ನಿಂದಲೇ ಆರಂಭವಾಯಿತು ನನ್ನ ಹೊಸ ಜೀವನ
ನಿನ್ನಿಂದ ಪಡೆದ ಆ ಆನಂದವನ್ನು
ಹಂಚಿಕೊಂಡ ಆ ದುಃಖವನ್ನು
ಹೇಳಿಕೊಂಡ ಆ ನನ್ನ ರಹಸ್ಯಗಳನ್ನು
ಪಡೆದುಕೊಂಡ ನಿನ್ನ ಆ ಸ್ನೇಹವನ್ನುಎಂದಿಗೂ ನಾನು ಮರೆಯಲಾರೆ
ಪಡೆದು ನಿನ್ನ ಸ್ನೇಹವನ್ನು ನಾನು ಧನ್ಯನಾದೆ ಇಂದು
ನಿನ್ನನ್ನು (ಮರೆಯಲಾರೆ ಎಂದೆಂದು) ಹೇಗೆ ನಾನು ಮರೆಯಲು ಸಾಧ್ಯ ಎಂದೆಂದೂ?
by Cletan Sequeira