Saturday, March 6, 2010

ಹಾರೈಕೆ (ಬಯಕೆ)

ನಿನ್ನ ಕಣ್ಣ ಕಾಂತಿಯು ನನ್ನ ಮನಸ್ಸಾ ಸೆಳೆಯಿತಲ್ಲಾ

ನಿನ್ನ ಕಣ್ಣ ಸನ್ನೆ ನನ್ನ ಮೂಕಾಗಿಸಿತಲ್ಲಾ


ಮಾತಿಲ್ಲಾ ಕತೆಯಿಲ್ಲಾ ಮನಸ್ಸಿನ ತುಂಬಾ ನಿನ್ನದೇ ನೆನಪಲ್ಲಾ

ನನ್ನ ಉಸಿರು ನೀನಾಗಿ ಹಾಡುಬಾರೆ ಜೊತೆಯಾಗಿ

ಜೇನು ಗೂಡಿನಂತಾ ನನ್ನ ಹೃದಯದಲ್ಲಿ ಜೇನಾಗಿ

ನೀ ಬಂದು ಜೇನಸಿಹಿಯ ತುಂಬಬಾರದೇನು?


ಕಹಿ ನೆನಪುಗಳೇ ತುಂಬಿರುವ ನನ್ನ ಹೃದಯದಲ್ಲಿ

ಸಿಹಿ ಜೇನನ್ನು ತುಂಬಬಾರದೇನು?

ಹಾರೋ ಹಕ್ಕಿಯಂತೆ ರೆಕ್ಕೆ ಬಿಚ್ಚಿ ನನ್ನನ್ನು ಸೇರಬಾರದೇನು?

ಚುಕ್ಕಿಯಂತಹ ನಿನ್ನ ಕಣ್ಣ ಅಂದ ನನ್ನನ್ನು ಸೆಳೆಯದೇ ಇರುವುದೇನು?


ರಸಪಾಕದಂತಹ ನಿನ್ನ ನಗು ನನ್ನನ್ನು ಕೆಣಕದೇ ಇರುವುದೇನು?

ಎಷ್ಟು ಹೊಗಳಿದರೂ ಮುಗಿಯದು ನಿನ್ನಂದ ಮೂಕನಾಗಿ

ಎಷ್ಟು ಹೊಗಳಿದರೂ ಮುಗಿಯದು ನಿನ್ನಂದ ಮೂಕನಾಗಿ

ಕೊನೆಗೆ ನಾ ಹಾರೈಸುವೆ ಇರಲಿ ನಿನ್ನ ಬಾಳು ಎಂದೆಂದು ಚೆಂದ ಚೆಂದ


by Guddappa

No comments:

Post a Comment