ಭಗವಂತ
ಬಾ ಬಾರೋ ಬಾರೋ....ಬಾ ಬಾರೋ ಬಾರೋ
ಬಾ ಬಾರೋ ಭಗವಂತ ಭಗವಂತ
ತೋರಯ್ಯ ನಿನ್ನಯ ಮಹಿಮೆಯ ಗುಣವಂತ, ಗುಣವಂತ
ಸಿಡಿಲಾಗಿ, ಮಳೆಯಾಗಿ, ಮಿಂಚಾಗಿ, ಮಳೆಯಾಗಿ
ಭೂಮಿಗೆ ಬಾರಯ್ಯ ನನ್ನಯ್ಯ ಭಗವಂತ
ಪೂಜಾರಿ ಬಾಯಲ್ಲಿ, ಭಕ್ತಿಯ ಮಾತಿಲ್ಲ, ವಿದ್ಯಾರ್ಥಿ ಮನಸಲ್ಲಿ
ಓದುವ ಛಲವಿಲ್ಲ, ಸತ್ಯಕ್ಕೆ ಬೆಲೆಯಂತೂ ಮೊದಲೇನೆ ಇಲ್ಲಿಲ್ಲ
ಅವತಾರಿ ನೀನಾಗಿ ಬಾರಯ್ಯ ಭೂಮಿಗೆ ಭಗವಂತ ಭಗವಂತ
ಬಾ ಬಾರೋ ಭಗವಂತ ಗುಣವಂತ
ತೋರಯ್ಯ ನಿನ್ನಯ ಮಹೆಮೆಯ ಗುಣವಂತ, ಭಗವಂತ
ಸೃಷ್ಟಿಯ ಮೂಲಾನು ನೀನಯ್ಯ ಭಗವಂತ
ಕರೆದರೂ ಕೇಳದೇ ಹೋಗುವೆ ಯಾಕಂತ
ಬಡವರ ಪಾಲಿಗೆ ಭಾಗ್ಯವ ನೀಡಯ್ಯ
ಬೇಡಿ ಬಂದವರ ಹರಸಲು ಬಾರಯ್ಯ ಭಗವಂತ ಭಗವಂತ
ಅನ್ಯಾಯ ಮಾಡುವ ಜನರನ್ನ ನೋಡಯ್ಯ ಸರಿದಾರಿಯಲ್ಲಿ
ನಡೆಯುವ ಮಾರ್ಗವ ನೀಡಯ್ಯ
ಕಷ್ಟ ಪಡುವ ಕೈಗಳನ್ನು ಕಾಪಾಡಲು ಬಾರಯ್ಯ
ನಿನ್ನನ್ನು ನಂಬಿದವರನ್ನು ಕೈಬಿಡದೆ ಕಾಯಯ್ಯ
ಬಾ ಬಾರೋ ಭಗವಂತ ಭಗವಂತ
ತೋರಯ್ಯ ನಿನ್ನಯ ಶಕ್ತಿಯ ಗುಣವಂತ, ಭಗವಂತ
ಸಕಲ ಜೀವಿಯಲ್ಲೂ ನೀನಯ್ಯ ನೆನೆದೊಡೆ ಮನದಲ್ಲಿ
ನೆಲೆಸುವಂತೆ ನೋಡಯ್ಯ
ಪಂಚಭೂತಗಳಲ್ಲೂ ನೀನಯ್ಯ ಪರರ ನಿಂದನೆ ನಿಲ್ಲಿಸಲು
ಭೂಮಿಗೆ ಬಾರಯ್ಯ
ನೀ ತೋರುವ ದಾರಿಯು ನನಗಯ್ಯ
ನಾ ನಡೆವೆನು ಮಾರ್ಗವ ತೋರಯ್ಯ
ಏನೇ ಬರಲಿ ಬಾಳಲಿ ನಾನೆಂದೂ ನಿನ್ನ ಬಿಡೆನು ಕೇಳಯ್ಯ
ಈಗಾದರೂ ಬಂದು ನನ್ನನ್ನು ಹರಸಯ್ಯ
ಬಾ ಬಾರೋ ಬಾರೋ ಭಗವಂತ ಗುಣವಂತ
ತೋರಯ್ಯ ನಿನ್ನಯ ಮಹೆಮೆಯ ಗುಣವಂತ, ಭಗವಂತ
by Guddappa
Subscribe to:
Post Comments (Atom)
No comments:
Post a Comment